ಛೋಟಿಸಿ ಗಝಲ್

ಪ್ರೀತಿಯೆಂದರೇನು ನಾನೇನು ಬಲ್ಲೆನು
ನೀನಿಲ್ಲದೆಯೂ ಉಸಿರಾಡುತಿಹೆನು
ಬರಿ ಆಗೊಮ್ಮೆ ಈಗೊಮ್ಮೆ ನಿನ್ನ ನೆನಪು
ದಿನನಿತ್ಯ ದ ಜಂಜಾಟದಲಿ ಪರದಾಡುತಿಹೆನು
ನಿನಗಾಗಿ ಬರೆದ ಕವನಗಳ ತೋರಿಸಿ
ನಾನೊಬ್ಬ ಕವಿಯೆಂದು ಮೆರೆದಾಡುತಿಹೆನು