ದಾರಿ

ನೀ ನಡೆಯುವ ದಾರಿಯ ಬದಿಯಲ್ಲಿ ನಿಂತು
ನಿನ್ನೊಂದಿಗೆ ಮಾತನಾಡಲು ಹಾತೊರೆಯುತಿದ್ದ ಹೃದಯವನು
ನೀ ನೋಡದೆ ದಾಟಿ ಹೋದಾಗ ಸಂತೈಸುವ ಆ ಕ್ಷಣಗಳನು
ನೆನೆಯುತ್ತ
ನಾ ನಿನ್ನೆ ನಿಂತಾಗ
ನೀ ಮತ್ತದೇ ದಾರಿಯಲಿ ನಡೆದು ಹೋದೆ
ನಿನ್ನ ಕಂದಮ್ಮಗಳ ಜೊತೆಗೆ !!!!!