ಹತ್ತು-ಹನ್ನೊಂದು

 


 

ಹತ್ತು ಹನ್ನೊಂದಾಯಿತು

ವರ್ಷ ಇನ್ನೊಂದಾಯಿತು

ತಲೆ ಮೇಲೆ ಶ್ವೇತ ಕೇಶ

ಒಂದಿತ್ತು, ಇನ್ನೊಂದಾಯಿತು

 

ಆದರೆ ಹೃದಯ ತರುಣವಾಗುತಿದೆ

ಮನದಂಗಳದಿ ಶುಭ್ರ ಅರುಣ ಮೂಡುತಿದೆ

ಖುಷಿಯ ದಾರಿಗೆ ಬದುಕು

ಮೃದುಹಸ್ತದಿ ದೂಡುತಿದೆ

 

ಪ್ರಥಮ ದಿನವಿದು ಇನ್ನುಳಿದ ಜೀವನಕ

ಹದಿನೆಂಟು ನಾನೆಂದೂ ಭುವಿಮೇಲೆ ಇರುತನಕ

ಉತ್ಸಾಹವ ಕುಂದದೆ ಬದುಕುವೆನು ನಾನು

ಬಿಡಲಾರೆ ಹಟವನ್ನು ಜಿಗಿಯುವರೆಗೆ ಗುರಿತನಕ

 

ಪ್ರತಿ ವರುಷ ಕಳೆದಂತೆ ಪಕ್ವವಾಗುತಿಹೆ ನಾನು

ಏನೊಳಿತು ಏನಿಲ್ಲ ಎಲ್ಲ ತಿಳಿಯುತಿಹೆ ನಾನು

ಪ್ರತಿವರುಷ ಒಂದು ಬೇಡಿ ಕಳಚುತಿದೆ ಮೆದುಳು

ಒಳಿತನ್ನೇ ಮಾಡಲು ಹವಣಿಸುತಿದೆ ಹೃದಯ

 

ಹಣ್ಣಾಗಿಸು ಮುಪ್ಪಾಗಿಸು ನಿರ್ಜೀಗೊಳಿಸು ಪ್ರಭುವೇ

ಕರ್ಮದಲೇ ಖುಷಿಪಡುವ ಆಸೆ ನೀಡು ಪ್ರಭುವೇ

ನೀಡು ನನ್ನ ಬಾಳಿಗೊಂದು ಬೆಳಕನು

ನಡೆಸಲು ಜಗದಲ್ಲಿ ಸಾರ್ಥಕತೆಯಾ ಬದುಕನು

 

( ಲೇಖನಿ: ಉತ್ತಮ ಸಿ ಯಲಿಗಾರ )