Smile :-)


 

 

 

Just withstand the freight of the night

See ahead there is light

Don’t be sad for the minute that wasn’t alright

Cause a minute is waiting to approach with delight

In a smiley-loaded flight

 

Don’t worry and have wrinkles

You can smile and have dimples,

Let the smile infect contagiously,

Face life courageously,

No curve is as elegant as a smile,

No face is graceful without a smile

 

Make your face a nest of a birdie smile,

Give its eggs the warmth of love,

See that the birdies will multiply,

Then they will fly,

From your cheeks to other faces,

To build nests again with divine laces

 

(Uttam’s pen, 24.12.2010)

 

Photo Courtesy: Ryan Brenizer (Flickr.com)

 

 

 

 

 

 

 

 


 

ಅವಕಾಶ

 

ಬೀಜದ ಆಳದಲೊಂದು ಆಸೆ ಉಂಟು ಮರವಾಗಬೇಕೆಂದು

ಮೊಟ್ಟೆಯ ಗರ್ಭದಲೊಂದು ಬಯಕೆ, ಹಾರಾಡಬೇಕೆಂದು

ಪ್ರತಿ ಪದದಲೂ ಇದೆ ಆಕಾಂಕ್ಷೆ ಪದ್ಯವಾಗಬೇಕೆಂದು

ಹನಿ ಹನಿಯೂ ಹವಣಿಸುವದು ನದಿಯಾಗಬೇಕೆಂದು

 

ನೀರು ಸಿಕ್ಕರೆ ಮಾತ್ರ ಬೀಜ ಮೊಳಕೆಯೊಡೆಯುವದು

ಕಾವು ಸಿಕ್ಕರೆ ಮಾತ್ರ ಮೊಟ್ಟೆ ಗರಿಗೆದರುವದು

ಕವಿಯ ಕೈಸೇರಿದಾಗಲೇ ಪದ ಪದ್ಯವಾಗುವದು

ಮಿಲಿಯ ಹನಿಗಳು ಸೇರಿದರೂ, ದಾರಿ ಸಿಕ್ಕರಷ್ಟೇ ನದಿಯಾಗುವದು

 

ಆಸೆಗಳು ಬೇಕು

ಅವು ಈಡೇರಲು ಅವಕಾಶಗಳೂ ಬೇಕು

ನಾವೆಷ್ಟು ಇಷ್ಟಪಟ್ಟರೂ, ಎಷ್ಟು ಪಟ್ಟು ಹಿಡಿದರೂ

ಹಾರಾಡಲು ರೆಕ್ಕೆಗಳಷ್ಟೇ ಅಲ್ಲ, ಸಿಡಿಲಿಲ್ಲದ ಆಕಾಶಗಳೂ ಬೇಕು

(ಲೇಖನಿ: ಉತ್ತಮ ಸಿ ಯಲಿಗಾರ)

ತಾಯೆ ಬಾ

ತಾಯೆ ಬಾ

 


ಎಂದೂ ಹರೆಯದ ತಾಯಕ್ಕ

ಎಲ್ಲರ ಮನೆತನಕ ಬಾರಕ್ಕ ||

 

ಕನ್ನಡದೆಣ್ಣೆ‍‌‍‌‍ಯಲಿ ಮೀಯಿಸುತೆಲ್ಲರ

ಇಂಗ್ಲಿಷ್ ಧೂಳನು ಓಡಿಸುತೆಲ್ಲರ

ಮನದಲಿ ಕನ್ನಡ ರಂಗೋಲಿ ಬಿಡಿಸಕ್ಕ ||

 

ಮನೆಯ ಅಮ್ಮನೇ ಮನೆಗೆ ಹಿತ

ಎಲ್ಲರ ಮನೆಯಲಿ ಮನದಲಿ

ಉಳಿವಳು ಕಡೆತನಕ ||

 

ನಾಡಿನ ಭಾಷೆಯ ತಂಗಿಯರೆಲ್ಲರ

ಪ್ರೀತಿಸಿದ ನೀನು ಹಿರಿಯಕ್ಕ

ಎಲ್ಲರ ಭಾವವ ನಿನ್ನುಸಿರಲೇ

ಒಸರುವ ಶಕ್ತಿ ತಾರಕ್ಕ ||

 

ಕನ್ನಡ ಕಿನ್ನರ ಲೋಕದ

ಬಣ್ಣದ ಕನ್ನಡಕವ ತೆಗೆದು

ನಿಜಬೆಳಕನು

ಕನ್ನಡ ನುಡಿಯಲಿ ಹರಸಕ್ಕ ||

 

(ರಚನೆ: ನಳಿನಿ ವಿಜಯಕುಮಾರ್)

 

ಕವಿ ಪರಿಚಯ :

ನಳಿನಿ ವಿಜಯಕುಮಾರ್ BSNL ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮೃದು ಮಾತು ಮತ್ತು ಕವಿ ಹೃದಯದವರು.

ಕಲೆ ಮತ್ತು ಕನ್ನಡ ಹವ್ಯಾಸಿ ನಾಟಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಳಿನಿ ಕೌದಿಎಂಬ ಕವನ ಸಂಕಲನ ರಚಿಸಿದ್ದಾರೆ.


 

Beauty


 

 

Beauty is not fairness, the glowing skin
Beauty is fairness, the quality of a king

Beauty is not the green eyes
Beauty is the soothing ice

Beauty is not the rosy lips
Beauty is the blossoming tulips

Beauty is not the curvicular eyebrows
It’s the colors of rainbows

Beauty is not what is on the chest
Beauty is that inside the breast
That is the heart…
A heart that can dream….a better tomorrow
A heart that can feel…..the other’s sorrow
A heart that can withstand … the pain of the self
And a heart that can understand……….

 

(Genuinely Uttam’s)