ಭಟ್ಟರ ಬುಟ್ಟಿಯಿಂದ

ಭಟ್ಟರ ಬುಟ್ಟಿಯಿಂದ  ಒಬ್ಬ ಸಹೋದ್ಯೋಗಿಯ ಸಾಹಿತ್ಯ
 
ವಿಪರ್ಯಾಸ

 
ಹುಟ್ಟು ಹಬ್ಬದ ದಿನ ಆನಂದಿಸುತ್ತಾರೆ
                           ಅಭಿನಂದಿಸುತ್ತಾರೆ
ಆದರೆ ಮೊಂಬತ್ತಿ        ನಂದಿಸುತ್ತಾರೆ
 
 
ಅಸಹಾಯಕತೆ

 

ಪ್ರಿಯೇ
              ನಿನಗೊಂದು ಸಿಹಿಮುತ್ತು ನೀಡಲೇ?
ಪ್ರಿಯಾ
                       ಬೇಡ ಬೇಡ ನನಗೀಗಾಗಲೇ
                                        ‘ಸಕ್ಕರೆ ಕಾಯಿಲೆ’
 
 
ಕಾರು-ಬಾರು

 
             ನಲ್ಲ ನಲ್ಲೆ ಮಾಡಿದ್ದೇ ಕಾರುಬಾರು
ನಲ್ಲೆ ಕೈ ಕೊಟ್ಟಾಗ ನಲ್ಲ ಹೊಕ್ಕಿದ್ದೆ ‘ಬಾರು’
 
 
ಪರಿಸರ

 

ನೀರಿನ ಪೋಲು
ನಾಡಿನ ಸೋಲು
           ಜೀವನದಲ್ಲಿ ಒಮ್ಮೆ ನೋಡಿ ಜೋಗದ ಗುಂಡಿ
ನಿಮ್ಮ ಮನೆ ಮನೆಗಳಲ್ಲಿ ಮಾಡಿಕೊಳ್ಳಿ ಇಂಗುಗುಂಡಿ
 
 
ಇಕ್ಕಟ್ಟು ಬಿಕ್ಕಟ್ಟು

 
              ನೂತನ ಸರಕಾರದಲ್ಲಿ ತೋರಿತ್ತು ‘ಬಿಕ್ಕಟ್ಟು’
ಏಕೆಂದರೆ ಮಂತ್ರಿಯಾಗಲು ಇರಲಿಲ್ಲ ಜಾಗ ‘ಇಕ್ಕಟ್ಟು’
 

ರಚನೆ: ಮಹಾಬಲೇಶ್ವರ ಭಟ್ಟ,
ಉಪ ಮಂಡಲ ಅಭಿಯಂತರರು,
BSNL, O/o AGM (CC),
Amenity Block,
ರಾಜಭವನ ರಸ್ತೆ ,
ಬೆಂಗಳೂರು

 
 
 
 
 
 
 
 
 
 
 
 
 
 
 
 
 
 
 
 
 
 
 

Cartoon Coutesy: Satish Acharya (http://cartoonistsatish.blogspot.com/)