ಇದೆಂಥ ಬೀಳ್ಕೊಡುಗೆ!

 

2

 

ಇದೆಂಥ ಬೀಳ್ಕೊಡುಗೆ!
ನೆನಪೊಂದೇ ಇದರ ಕೊಡುಗೆ

ಹೇಗೆ ಹೇಳಲಿ ನಿನಗೆ ವಿದಾಯ
ದೂರವಾದಂತಿದೆ ಸಂಪೂರ್ಣ ಜಗ
ಈ ಸಲಿಲ ಭರಿತ ಕಂಗಳಲಿ
ಮಸುಕಾಗಿದೆ ನಿನ್ನ ಮೊಗ  

3     

ಕೈ ಏಳಲೊಲ್ಲದು ಬೈ ಮಾಡಲು
ಮನಸೊಪ್ಪದು ದೂರವಾಗಲು
ಇರಬಹುದೇ ಪರಿಮಳವಿಲ್ಲದ ಹೂವು
ವಾತಾವರಣವು ಕ್ರೂರವಾಗಲು

ನೀನಂದು ದೊರೆತೆ ನನಗೆ
ಮರುಭೂಮಿಯಲಿ ಜಲಾಶಯದಂತೆ
ನೀನಂದು ಬೆರೆತೆ ನನ್ನೊಂದಿಗೆ
ಸುಹೃದಯಕೆ ಸದಾಶಯದಂತೆ

4

 

ಆದರೆ ಇಂದು ಮರೆಯಾಗುತಿರುವೆ
ಮರೀಚಿಕೆಯ ಮಾಯೆಯಂತೆ
ಈ ಮನಸಿಗೆ ಬರೆನೀಡಿ
ಸುಡುಬಿಸಿಲ ಹಸಿ ಗಾಯದಂತೆ

ನೀ ಕಲಿಸಿದೆ ನನಗೆ ಪ್ರೀತಿ
ಹೋಗಲಾಡಿಸಿದೆ ಭೀತಿ
ನಿನ್ನ ತೋಳಲಿ ಮರೆತೆ
ನಾ ಈ ಜಗದ ನೀತಿ

5

ಮರೆಯಲಿ ಹೇಗೆ ನಿನ್ನ ಸಾಂಗತ್ಯವನು
ಒಂದೇ ಒಂದು ಕ್ಷಣದಲಿ
ನಗಿಸಿದೆ ನಲಿದಾಡಿಸಿದೆ
ತೇಲಿಸಿದೆ ಸುಖ ಹೊನಲಲಿ

 

ಸವಿನೆನಪುಗಳನು ನೀಡಿರುವೆ
ಮೀನುಗಳಿರುವಷ್ಟು ಕಡಲಲಿ
ಇನ್ಯಾರನೋ ಹೇಗೆ ಪ್ರೀತಿಸಲಿ
ಒಂದೇ ಹೃದಯವಿದೆ  ಒಡಲಲಿ

13

ಬದುಕಿ ಉಳಿಯಲೇ ನಾನು?
ನೀನಿಲ್ಲದೆ ಉಸಿರಾಡುವ ಹಂಬಲವಿಲ್ಲದಾಗಿದೆ
ಆದರೂ ಸವಿನೆನಪುಗಳನು ನೆನೆದುಕೊಳ್ಳುತ
ಎದೆಬಡಿತವು ನಿಲ್ಲದಾಗಿದೆ!!

12

ಲೇಖನಿ : ಉತ್ತಮ ಸಿ ಯಲಿಗಾರ